Google Home ನೊಂದಿಗೆ ಹೆಚ್ಚು ವ್ಯವಸ್ಥಿತವಾದ ಮತ್ತು ವೈಯಕ್ತೀಕರಿಸಲಾದ ಸ್ಮಾರ್ಟ್ ಹೋಮ್ ಅನ್ನು ರಚಿಸಿ. ನಿಮ್ಮ Google Nest, Wifi ಮತ್ತು Chromecast ಸಾಧನಗಳ ಜೊತೆಗೆ ಸಾವಿರಾರು ಹೊಂದಾಣಿಕೆಯ ಸ್ಮಾರ್ಟ್ ಹೋಮ್ ಉತ್ಪನ್ನಗಳಾದ ಲೈಟ್‌ಗಳು, ಕ್ಯಾಮರಾಗಳು, ಥರ್ಮೋಸ್ಟಾಟ್‌ಗಳು ಮತ್ತು ಇತ್ಯಾದಿಗಳೆಲ್ಲವನ್ನೂ Google Home ಆ್ಯಪ್ ಮೂಲಕ ಸೆಟಪ್ ಮಾಡಿ, ನಿರ್ವಹಿಸಿ ಮತ್ತು ನಿಯಂತ್ರಿಸಿ.
ನಿಮ್ಮ ಹೋಮ್ ವೀಕ್ಷಣೆಯನ್ನು ವೈಯಕ್ತೀಕರಿಸಿ.
ನೀವು ಆ್ಯಪ್ ಅನ್ನು ತೆರೆದಾಗ ಸುಲಭವಾಗಿ ಆ್ಯಕ್ಸೆಸ್ ಮಾಡಲು ನಿಮ್ಮ ಹೆಚ್ಚು ಬಳಸಿದ ಸಾಧನಗಳು, ಆಟೋಮೇಷನ್‌ಗಳು ಮತ್ತು ಆ್ಯಕ್ಷನ್‌ಗಳನ್ನು ಮೆಚ್ಚಿನವುಗಳು ಎಂಬ ಟ್ಯಾಬ್‌ಗೆ ಪಿನ್ ಮಾಡಿ. ನಿಮ್ಮ Nest ಕ್ಯಾಮರಾಗಳು ಮತ್ತು ಡೋರ್‌ಬೆಲ್ ಲೈವ್ ಫೀಡ್‌ಗಳನ್ನು ವೀಕ್ಷಿಸಿ ಮತ್ತು ಈವೆಂಟ್ ಇತಿಹಾಸದ ಮೂಲಕ ಸುಲಭವಾಗಿ ಸ್ಕ್ಯಾನ್ ಮಾಡಿ. ಆಟೋಮೇಷನ್‌ಗಳ ಟ್ಯಾಬ್‌ನಲ್ಲಿ ದಿನಚರಿಗಳನ್ನು ಸೆಟಪ್ ಮಾಡಿ ಮತ್ತು ನಿರ್ವಹಿಸಿ. ಹಾಗೂ ಒಟ್ಟುಗೂಡಿಸಿದ ಸೆಟ್ಟಿಂಗ್‌ಗಳ ಟ್ಯಾಬ್‌ನಲ್ಲಿ ಯಾವುದೇ ಅನುಮತಿಗಳನ್ನು ತ್ವರಿತವಾಗಿ ಎಡಿಟ್ ಮಾಡಿ.
ಮನೆಯಲ್ಲಿ ಏನಾಗುತ್ತಿದೆ ಎಂಬುದನ್ನು ಒಂದೇ ನೋಟದಲ್ಲಿ ಅರ್ಥಮಾಡಿಕೊಳ್ಳಿ.
Google Home ಆ್ಯಪ್ ಅನ್ನು ನಿಮ್ಮ ಮನೆಯ ಸ್ಥಿತಿಯನ್ನು ತೋರಿಸಲು ವಿನ್ಯಾಸಗೊಳಿಸಲಾಗಿದೆ ಮತ್ತು ನೀವು ಕಳೆದುಕೊಂಡಿರಬಹುದಾದ ವಿಷಯಗಳ ಕುರಿತು ನಿಮ್ಮನ್ನು ಅಪ್ ಟು ಡೇಟ್ ಆಗಿರಿಸುತ್ತದೆ. ನಿಮ್ಮ ಮನೆಯನ್ನು ಯಾವಾಗ ಬೇಕಾದರೂ ಪರಿಶೀಲಿಸಿ ಮತ್ತು ಇತ್ತೀಚಿನ ಈವೆಂಟ್‌ಗಳ ರೀಕ್ಯಾಪ್ ಅನ್ನು ನೋಡಿ.
ನಿಮ್ಮ ಮನೆಯನ್ನು ಎಲ್ಲಿಂದಲಾದರೂ ನಿಯಂತ್ರಿಸಿ.
Wear OS ಗಾಗಿ Google Home ನಿಮ್ಮ ವಾಚ್‌ನಿಂದ ಹೊಂದಾಣಿಕೆಯ ಸ್ಮಾರ್ಟ್ ಹೋಮ್ ಸಾಧನಗಳನ್ನು ನಿಯಂತ್ರಿಸಲು ನಿಮಗೆ ಅನುಮತಿಸುತ್ತದೆ. ಲೈಟ್‌ಗಳನ್ನು ಆನ್ ಮಾಡಿ, ಥರ್ಮೋಸ್ಟಾಟ್ ಅನ್ನು ಹೊಂದಿಸಿ ಅಥವಾ ನಿಮ್ಮ ಮುಂಭಾಗದ ಬಾಗಿಲಲ್ಲಿ ವ್ಯಕ್ತಿ ಅಥವಾ ಪ್ಯಾಕೇಜ್ ಇರುವಾಗ ಅಲರ್ಟ್ ಅನ್ನು ಪಡೆಯಿರಿ. ಮಣಿಕಟ್ಟಿನ ಮೇಲೆ ಟ್ಯಾಪ್ ಮಾಡಿದಂತೆ ನಿಮ್ಮ ಹೋಮ್ ಅನ್ನು ಸುಲಭವಾಗಿ ನಿರ್ವಹಿಸಲು ಮೆಚ್ಚಿನವುಗಳ ಟೈಲ್ ಅನ್ನು ಬಳಸಿ ಅಥವಾ ನಿಮ್ಮ ವಾಚ್ ಫೇಸ್‌ಗೆ ಸಾಧನವನ್ನು ಸೇರಿಸಿ.
ಸಹಾಯಕ ಹೋಮ್ ಖಾಸಗಿ ಮನೆಯಾಗಿದೆ.
ನಿಮ್ಮ ಗೌಪ್ಯತೆಯನ್ನು ರಕ್ಷಿಸುವುದು ಪ್ರಪಂಚದ ಅತ್ಯಂತ ಸುಧಾರಿತ ಭದ್ರತಾ ಮೂಲಸೌಕರ್ಯಗಳಲ್ಲಿ ಒಂದರ ಮೂಲಕ ಪ್ರಾರಂಭವಾಗುತ್ತದೆ, ಅದನ್ನು ನಾವು ನೇರವಾಗಿ Google ಉತ್ಪನ್ನಗಳಲ್ಲಿ ನಿರ್ಮಿಸುತ್ತೇವೆ ಹಾಗಾಗಿ ಅವುಗಳು ಡೀಫಾಲ್ಟ್ ಆಗಿ ಸುರಕ್ಷಿತವಾಗಿರುತ್ತವೆ. ಮತ್ತು ನಿಮ್ಮ ಮನೆಯನ್ನು ಉಪಯುಕ್ತವಾಗಿಸಲು Google ನಿಮ್ಮ ಹೊಂದಾಣಿಕೆಯ ಸಾಧನಗಳು ಮತ್ತು ಡೇಟಾವನ್ನು ಬಳಸುತ್ತದೆ, ಆದರೆ ನೀವು ಅನುಮತಿಸುವ ವಿಧಾನಗಳಲ್ಲಿ ಮಾತ್ರ. ನಿಮ್ಮ ಮಾಹಿತಿಯನ್ನು ನಾವು ಹೇಗೆ ರಕ್ಷಿಸುತ್ತೇವೆ ಮತ್ತು ನಿಮ್ಮ ಗೌಪ್ಯತೆಯನ್ನು ಹೇಗೆ ಗೌರವಿಸುತ್ತೇವೆ ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಲು safety.google/nest ನಲ್ಲಿ Google Nest ಸುರಕ್ಷತಾ ಕೇಂದ್ರಕ್ಕೆ ಭೇಟಿ ನೀಡಿ.
* ಕೆಲವು ಉತ್ಪನ್ನಗಳು ಮತ್ತು ಫೀಚರ್‌ಗಳು ಎಲ್ಲಾ ಪ್ರದೇಶಗಳಲ್ಲಿ ಲಭ್ಯವಿಲ್ಲದಿರಬಹುದು. ಹೊಂದಾಣಿಕೆಯಾಗುವ ಸಾಧನಗಳು ಅಗತ್ಯವಿವೆ.
ಅಪ್‌ಡೇಟ್ ದಿನಾಂಕ
ಡಿಸೆಂ 10, 2024