ದೃಢವಾದ ಭದ್ರತೆ, ನೈಜ ಸಮಯದ ನೋಟಿಫಿಕೇಶನ್‌ಗಳು, ಬಹು ಖಾತೆ ಬೆಂಬಲ ಮತ್ತು ನಿಮ್ಮ ಮೇಲ್‌ನಾದ್ಯಂತ ಕಾರ್ಯನಿರ್ವಹಿಸುವ ಹುಡುಕಾಟದೊಂದಿಗೆ ಅಧಿಕೃತ Gmail ಆ್ಯಪ್, Gmail ನ ಅತ್ಯುತ್ತಮವಾದುದ್ದನ್ನು ನಿಮ್ಮ Android ಫೋನ್ ಅಥವಾ ಟ್ಯಾಬ್ಲೆಟ್‌ಗೆ ನೀಡುತ್ತದೆ. Gmail, Wear OS ನಲ್ಲಿಯೂ ಲಭ್ಯವಿದೆ, ಇದರಿಂದ ನೀವು ಕ್ರಿಯಾಶೀಲರಾಗಿರಬಹುದು ಮತ್ತು ನಿಮ್ಮ ಮಣಿಕಟ್ಟಿನಿಂದಲೇ ಇಮೇಲ್‌ಗಳನ್ನು ನಿರ್ವಹಿಸಬಹುದು.
Gmail ಆ್ಯಪ್ ಮೂಲಕ ನೀವು ಇವುಗಳನ್ನು ಮಾಡಬಹುದು:
• ಶೇಕಡಾ 99.9 ಕ್ಕಿಂತ ಹೆಚ್ಚಿನ ಸ್ಪ್ಯಾಮ್, ಫಿಶಿಂಗ್, ಮಾಲ್‌ವೇರ್ ಮತ್ತು ಅಪಾಯಕಾರಿ ಲಿಂಕ್‌ಗಳು ನಿಮ್ಮ ಇನ್‌ಬಾಕ್ಸ್ ಅನ್ನು ಎಂದಿಗೂ ತಲುಪದಂತೆ ಸ್ವಯಂಚಾಲಿತವಾಗಿ ನಿರ್ಬಂಧಿಸಬಹುದು
• ಮುಜುಗರ ಉಂಟುಮಾಡುವ ತಪ್ಪುಗಳನ್ನು ತಡೆಯಲು, ಕಳುಹಿಸಿದ್ದನ್ನು ರದ್ದುಗೊಳಿಸಬಹುದು
• ಇತರರೊಂದಿಗೆ ಸಂಪರ್ಕ ಸಾಧಿಸಲು, ರಚಿಸಲು ಮತ್ತು ಸಹಯೋಗ ಹೊಂದಲು Google Chat ಅನ್ನು ಆನ್ ಮಾಡಬಹುದು
• Spaces ನಲ್ಲಿ ಒಂದು ಗುಂಪಾಗಿ ಹೆಚ್ಚಿನ ಕಾರ್ಯಗಳನ್ನು ಮಾಡಬಹುದು - ಇದು, ಜನರು, ವಿಷಯಗಳು ಮತ್ತು ಪ್ರಾಜೆಕ್ಟ್‌ಗಳನ್ನು ವ್ಯವಸ್ಥಿತಗೊಳಿಸಲು ಮೀಸಲಾದ ಸ್ಥಳವಾಗಿದೆ
• Google Meet ನೊಂದಿಗೆ ಉನ್ನತ ಗುಣಮಟ್ಟದ ವೀಡಿಯೊ ಕರೆಯನ್ನು ಆನಂದಿಸಬಹುದು
• ಸ್ಮಾರ್ಟ್ ಪ್ರತ್ಯುತ್ತರ ಸಲಹೆಗಳೊಂದಿಗೆ ಇಮೇಲ್‌ಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸಬಹುದು
• ಬಹು ಖಾತೆಗಳ ನಡುವೆ ಬದಲಿಸಬಹುದು
• ಫೈಲ್‌ಗಳನ್ನು ಸುಲಭವಾಗಿ ಲಗತ್ತಿಸಬಹುದು ಹಾಗೂ ಹಂಚಿಕೊಳ್ಳಬಹುದು
• ನೋಟಿಫಿಕೇಶನ್ ಕೇಂದ್ರ, ಬ್ಯಾಡ್ಜ್ ಮತ್ತು ಲಾಕ್ ಸ್ಕ್ರೀನ್ ಆಯ್ಕೆಗಳೊಂದಿಗೆ ಹೊಸ ಮೇಲ್‌ನ ಕುರಿತು ವೇಗವಾಗಿ ಸೂಚನೆ ಪಡೆಯಬಹುದು
• ತತ್‌ಕ್ಷಣದ ಫಲಿತಾಂಶಗಳು, ನೀವು ಟೈಪ್ ಮಾಡಿದ ತಕ್ಷಣ ಕಾಣಿಸುವ ಮುನ್ನೋಟಗಳು ಮತ್ತು ಕಾಗುಣಿತದ ಸಲಹೆಗಳೊಂದಿಗೆ ನಿಮ್ಮ ಮೇಲ್ ಅನ್ನು ವೇಗವಾಗಿ ಹುಡುಕಬಹುದು
• ನಿಮ್ಮ ಮೇಲ್ ಅನ್ನು ಲೇಬಲ್ ಮಾಡುವ ಮೂಲಕ, ನಕ್ಷತ್ರ ಹಾಕುವ ಮೂಲಕ, ಅಳಿಸುವ ಮೂಲಕ ಮತ್ತು ಸ್ಪ್ಯಾಮ್ ವರದಿ ಮಾಡುವ ಮೂಲಕ ವ್ಯವಸ್ಥಿತಗೊಳಿಸಬಹುದು
• ನಿಮ್ಮ ಇನ್‌ಬಾಕ್ಸ್ ಅನ್ನು ತ್ವರಿತವಾಗಿ ತೆರವುಗೊಳಿಸುವುದಕ್ಕಾಗಿ, ಆರ್ಕೈವ್ ಮಾಡಲು/ಅಳಿಸಲು ಸ್ವೈಪ್ ಮಾಡಬಹುದು
• ಥ್ರೆಡ್ ಮಾಡಲಾದ ಸಂಭಾಷಣೆಗಳೊಂದಿಗೆ ನಿಮ್ಮ ಮೇಲ್ ಅನ್ನು ಓದಬಹುದು
• ನಿಮ್ಮ Google ಸಂಪರ್ಕಗಳು ಅಥವಾ ನಿಮ್ಮ ಫೋನ್‌ನಿಂದ ನೀವು ಟೈಪ್ ಮಾಡಿದಂತೆಲ್ಲಾ ಸಂಪರ್ಕ ಹೆಸರುಗಳನ್ನು ಸ್ವಯಂ-ಪೂರ್ಣಗೊಳಿಸಬಹುದು
• ಆ್ಯಪ್‌ನಿಂದಲೇ Google Calendar ಆಹ್ವಾನಗಳಿಗೆ ಪ್ರತಿಕ್ರಿಯಿಸಬಹುದು
• ನಿಮ್ಮ ಇಮೇಲ್‌ಗಳ ತ್ವರಿತ ಅವಲೋಕನವನ್ನು ಪಡೆಯಲು ನಿಮ್ಮ Wear OS ವಾಚ್‌ನಲ್ಲಿ Gmail ತೊಡಕು ಮತ್ತು ಟೈಲ್ ಅನ್ನು ಸೇರಿಸಬಹುದು
Gmail ಎಂಬುದು Google Workspace ನ ಭಾಗವಾಗಿದೆ, ನೀವು ಮತ್ತು ನಿಮ್ಮ ತಂಡ ಸುಲಭವಾಗಿ ಸಂಪರ್ಕ ಸಾಧಿಸಲು, ರಚಿಸಲು ಮತ್ತು ಸಹಯೋಗ ಹೊಂದಲು ಅನುಮತಿಸುತ್ತದೆ. ನೀವು ಇವುಗಳನ್ನು ಮಾಡಬಹುದು:
• Google Meet ಅಥವಾ Google Chat ಮೂಲಕ ಸಹೋದ್ಯೋಗಿಗಳೊಂದಿಗೆ ಸಂಪರ್ಕ ಸಾಧಿಸಬಹುದು, Calendar ನಲ್ಲಿ ಆಹ್ವಾನವನ್ನು ಕಳುಹಿಸಬಹುದು, ನಿಮ್ಮ ಟಾಸ್ಕ್ ಲಿಸ್ಟ್‌ಗೆ ಕ್ರಿಯೆಯನ್ನು ಸೇರಿಸಬಹುದು ಹಾಗೂ ಇನ್ನಷ್ಟು ಮಾಡಬಹುದು, ಇವೆಲ್ಲವನ್ನೂ Gmail ಅನ್ನು ತೊರೆಯದೆ ಮಾಡಬಹುದು
• ಸೂಚಿಸಿದ ಕ್ರಿಯೆಗಳನ್ನು ಬಳಸಬಹುದು - ಉದಾಹರಣೆಗೆ ಸ್ಮಾರ್ಟ್ ಪ್ರತ್ಯುತ್ತರ, ಸ್ಮಾರ್ಟ್ ಕಂಪೋಸ್, ವ್ಯಾಕರಣದ ಸಲಹೆಗಳು ಹಾಗೂ ನಡ್ಜ್‌ಗಳು - ಈ ಕ್ರಿಯೆಗಳು, ನಿಮ್ಮ ಕೆಲಸವನ್ನು ಉತ್ತಮವಾಗಿ ನಿರ್ವಹಿಸಲು ಹಾಗೂ ಸರಳವಾದ ಕೆಲಸಗಳನ್ನು ನಿಭಾಯಿಸಲು ಸಹಾಯ ಮಾಡುತ್ತವೆ, ಇದರಿಂದ ನಿಮ್ಮ ಸಮಯವನ್ನು ಹೆಚ್ಚು ಉಪಯುಕ್ತವಾಗಿ ನೀವು ಬಳಸಿಕೊಳ್ಳಬಹುದು
• ಸುರಕ್ಷಿತವಾಗಿರಬಹುದು. ನಮ್ಮ ಮಷಿನ್ ಲರ್ನಿಂಗ್ ಮಾಡೆಲ್‌ಗಳ��� 99.9% ಗಿಂತ ಹೆಚ್ಚಿನ ಸ್ಪ್ಯಾಮ್, ಫಿಶಿಂಗ್ ಮತ್ತು ಮಾಲ್‌ವೇರ್ ನಮ್ಮ ಬಳಕೆದಾರರನ್ನು ತಲುಪುವುದನ್ನು ನಿರ್ಬಂಧಿಸುತ್ತವೆ
Google Workspace ಕುರಿತು ಇನ್ನಷ್ಟು ತಿಳಿಯಿರಿ: https://workspace.google.com/products/gmail/
ಇನ್ನಷ್ಟು ವಿವರಗಳಿಗಾಗಿ ನಮ್ಮನ್ನು ಫಾಲೋ ಮಾಡಿ:
Twitter: https://twitter.com/googleworkspace
LinkedIn: https://www.linkedin.com/showcase/googleworkspace
Facebook: https://www.facebook.com/googleworkspace/
ಅಪ್‌ಡೇಟ್ ದಿನಾಂಕ
ಡಿಸೆಂ 10, 2024