ಅಭಿ (ಚಲನಚಿತ್ರ)
ಆಭಿ | |
---|---|
ನಿರ್ದೇಶನ | ದಿನೇಶ್ ಬಾಬು |
ನಿರ್ಮಾಪಕ | ಪಾರ್ವತಮ್ಮ ರಾಜ್‌ಕುಮಾರ್ |
ಲೇಖಕ | ದಿನೇಶ್ ಬಾಬು |
ಪಾತ್ರವರ್ಗ | ಪುನೀತ್ ರಾಜ್‌ಕುಮಾರ್ ರಮ್ಯಾ |
ಸಂಗೀತ | ಗುರುಕಿರಣ್ |
ಛಾಯಾಗ್ರಹಣ | ದಿನೇಶ್ ಬಾಬು |
ಸಂಕಲನ | ಎಸ್ ಮನೋಹರ್ |
ಸ್ಟುಡಿಯೋ | ಪೂರ್ಣಿಮಾ ಎಂಟರ್‌ಪ್ರೈಸಸ್ |
ಬಿಡುಗಡೆಯಾಗಿದ್ದು | ೨೫ ಏಪ್ರಿಲ್ ೨೦೦೩ |
ಅವಧಿ | ೧೪೦ ನಿಮಿಷಗಳು |
ದೇಶ | ಭಾರತ |
ಭಾಷೆ | ಕನ್ನಡ |
ಬಾಕ್ಸ್ ಆಫೀಸ್ | ೧೬ ಕೋಟಿ [೧] |
"ಅಭಿ" ದಿನೇಶ್ ಬಾಬು ಅವರ ನಿರ್ದೇಶನದ ಕನ್ನಡ ಚಲನಚಿತ್ರ. ಈ ಚಿತ್ರವು ೨೦೦೩ರಲ್ಲಿ ಬಿಡುಗಡೆ ಆಯಿತು. ಪುನೀತ್ ರಾಜ್‌ಕುಮಾರ್ ನಾಯಕ ನಟನಾಗಿ ನಟಿಸಿರುವ ಈ ಚಿತ್ರ ನಟಿ ರಮ್ಯಾ ಅವರ ಚೊಚ್ಚಲ ಚಿತ್ರವಾಗಿದೆ.[೨] ಗುರುಕಿರಣ್ ಸಂಗೀತ ಸಂಯೋಜನೆಯ ಚಿತ್ರಕ್ಕೆ ಕನ್ನಡದ ಹಿರಿಯ ನಟ ರಾಜಕುಮಾರ್ ಅವರೂ ಕೂಡ ಹಾಡಿದ್ದಾರೆ.[೩] ಈ ಚಿತ್ರವನ್ನು ತೆಲುಗಿನಲ್ಲಿ ಅಭಿಮನ್ಯು ಎಂದು ಮರುನಿರ್ಮಾಣ ಮಾಡಲಾಗಿದ್ದು, ಕಲ್ಯಾಣ್ ರಾಮ್ ಜೊತೆ ರಮ್ಯಾ ಕನ್ನಡ ಭಾಷೆಯ ಚಿತ್ರದಲ್ಲಿ ಅಭಿನಯಿಸಿದ ಪಾತ್ರವನ್ನೇ ಮರು ಅಭಿನಯಿಸಿದ್ದಾರೆ.[೪][೫]
ಕಥಾ ಸಾರಾಂಶ
[ಬದಲಾಯಿಸಿ]ಅಭಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗಿಯಾಗಿ ಎಲ್ಲರೂ ಮೆಚ್ಚುವಂಥಹ ಉತ್ತಮ ವ್ಯಕ್ತಿ. ಭಾನು ಕುಟುಂಬವು ಬಾಡಿಗೆ ಮನೆ ಹುಡುಕಿಕೊಂಡು ಅಭಿಯ ಕುಟುಂಬವನ್ನು ಸಂಪರ್ಕಿಸುತ್ತದೆ. ಆರಂಭದಲ್ಲಿ ಭಾನು ಹಾಗೂ ಅಭಿ ನಡುವೆ ವೈಮನಸ್ಸು ಇದ್ದರೂ, ಕ್ರಮೇಣ ಒಬ್ಬರೊನ್ನೊಬ್ಬರು ಅರಿತುಕೊಂಡು ಪರಸ್ಪರ ಪ್ರೀತಿಸತೊಡಗುತ್ತಾರೆ. ಭಾನು ಮುಸ್ಲಿಂ ಮತ್ತು ಅಭಿ ಹಿಂದೂ ಆಗಿರುವುದರಿಂದ, ಭಾನುವಿನ ತಂದೆಗೆ ಈ ಪ್ರೀತಿಗೆ ಒಪ್ಪಿಗೆ ಇರುವುದಿಲ್ಲ. ಅಭಿಯನ್ನು ಥಳಿಸಲು ನಿರ್ಧರಿಸುತ್ತಾನೆ. ಅಭಿ ಹಾಗೂ ಭಾನುವಿನ ತಂದೆಯ ಹೋಡೆದಾಟಗಳು ಉಂಟಾಗುತ್ತದೆ. ಆದರೆ ಬಾನು ಅಸನ್ನು ತಡೆಯುತ್ತಾಳೆ. ಭಾನುವಿನ ತಂದೆ ಈ ಪ್ರೀತಿಯನ್ನು ತಡೆಯಲು ಕುಟುಂಬ ಸಮೇತ ಬೆಂಗಳೂರು ತೊರೆದು ಹುಬ್ಬಳ್ಳಿ ಸೇರುತ್ತಾರೆ. ಅಭಿ ಭಾನುವನ್ನು ಹುಡುಕಿಕೊಂಡು ಹುಬ್ಬಳ್ಳಿ ಸೇರುತ್ತಾನೆ. ಹೀಗೆ ಭಾನು ಇರುವ ಊರನ್ನು ಸೇರುವ ಅಭಿ ಅಂತಿಮವಾಗಿ ಭಾನುವನ್ನು ಹೇಗೆ ಮದುವೆಯಾಗುತ್ತಾನೆ ಎಂಬುದೇ ಈ ಚಲನಚಿತ್ರದ ಕಥಾ ಹಂದರವಾಗಿದೆ.
ಪಾತ್ರವರ್ಗ
[ಬದಲಾಯಿಸಿ]- ಅಭಿಷೇಕ್ "ಅಭಿ" ಪಾತ್ರದಲ್ಲಿ ಪುನೀತ್ ರಾಜ್‌ಕುಮಾರ್
- ಭಾನು ಪಾತ್ರದಲ್ಲಿ ರಮ್ಯಾ
- ಭಾನು ಅಜ್ಜಿಯಾಗಿ ಸಾಹುಕಾರ್ ಜಾನಕಿ
- ಅಭಿಯ ತಾಯಿಯಾಗಿ ಸುಮಿತ್ರಾ
- ಹಸೀನಾ ಬೇಗಂ ಪಾತ್ರದಲ್ಲಿ ಉಮಾಶ್ರೀ
- ಮೊಹಮ್ಮದ್ ಖಾನ್ ಪಾತ್ರದಲ್ಲಿ ಸತ್ಯಜಿತ್
- ಏಣಗಿ ನಟರಾಜ್
- ರಾಜು ಅನಂತಸ್ವಾಮಿ
- ಹೊನ್ನವಳ್ಳಿ ಕೃಷ್ಣ
- ವೈಜನಾಥ ಬಿರಾದಾರ್
- ಅಬ್ದುಲ್ ಗಫಾರ್ ಖಾನ್ ಪಾತ್ರದಲ್ಲಿ ಹುಲಿವಾನ ಗಂಗಾಧರಯ್ಯ
- ರಾಧಾ ಪಾತ್ರದಲ್ಲಿ ಬಿ.ಜಯಾ
- ಮೊಹಮ್ಮದ್ ಖಾನ್ ಅವರ ಪತ್ನಿಯಾಗಿ ಶೈಲಜಾ ಜೋಶಿ
- ಕಾವ್ಯ ಪ್ರಕಾಶ್
- ಜೋಸೆಫ್ ಪಾತ್ರದಲ್ಲಿ ಸುನೀಲ್ ಪುರಾಣಿಕ್
- ರುಕ್ಸಾನಾ ಬಾನೋ ಆಗಿ ರೇಖಾ ವಿ.ಕುಮಾರ್
- ಗುಂಡೂರಾವ್
- ಶ್ರೀಧರ್
- ಸೈಫ್ ಅಲಿಯಾಗಿ ಸಬ್ ಇನ್ಸ್ಪೆಕ್ಟರ್ ಆಗಿ ಭರತ್ ಭಾಗವತರ್
- ನಾಗರಾಜ್
- ಗುರುಪ್ರಸಾದ್
- ಮಹೇಶ್
- ಸುಂದರೇಶ್
- ತುಮಕೂರು ಮೋಹನ್
ನಿರ್ಮಾಣ ಮತ್ತು ಬಿಡುಗಡೆ
[ಬದಲಾಯಿಸಿ]ಪೂರ್ಣಿಮಾ ಎಂಟರ್‌ಪ್ರೈಸಸ್ ಲಾಂಛನದಲ್ಲಿ ಪಾರ್ವತಮ್ಮ ರಾಜ್‌ಕುಮಾರ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ೨೫ ಏಪ್ರಿಲ್ ೨೦೦೩ರಲ್ಲಿ ಬಿಡುಗಡೆಯಾದ "ಆಭಿ" ಚಿತ್ರವು ಚಲನಚಿತ್ರ ಮಂದಿರಗಳಲ್ಲಿ ಸತತ ೧೫೦ ದಿನಗಳ ಪ್ರದರ್ಶನವನ್ನು ಕಂಡಿದೆ.[೧]
ಹಾಡುಗಳು
[ಬದಲಾಯಿಸಿ]"ಆಭಿ" ಚಿತ್ರಕ್ಕೆ ಗುರುಕಿರಣ್�� ಹಿನ್ನಲೆ ಹಾಗೂ ಹಾಡುಗಳಿಗೆ ಸಂಗೀತವನ್ನು ಸಂಯೋಜಿಸಿದ್ದಾರೆ ಹಾಗೂ ಹಾಡಿನ ಹಕ್ಕುಗಳನ್ನು ಅಶ್ವಿನಿ ಆಡಿಯೋ ಸಂಸ್ಥೆ ಹೊಂದಿದೆ.
ಸಂ. | ಹಾಡು | ಸಾಹಿತ್ಯ | ಹಾಡಿದವರು | ಸಮಯ |
---|---|---|---|---|
1. | "ಮಾ ಮಾ ಮಾ ಮಜಾ ಮಾಡು" | ಹಂಸಲೇಖ | ಪುನೀತ್ ರಾಜ್‌ಕುಮಾರ್ | ೦೪:೧೨ |
2. | "ಸುಮ್ ಸುಮ್ನೆ" | ಭಂಗೀ ರಂಗ | ಉದಿತ್ ನಾರಾಯಣ, ಸೌಮ್ಯಾ ರಾವ್ | ೦೩:೫೩ |
3. | "ಈ ನನ್ನ ಕಣ್ಣನೇ" | ಕೆ.ಕಲ್ಯಾಣ್ | ಉದಿತ್ ನಾರಾಯಣ್, ಮಹಾಲಕ್ಷ್ಮಿ ಅಯ್ಯರ್ | ೦೫:೦೭ |
4. | "ವಿಧಿ ಬರಹ" | ಕೆ.ಕಲ್ಯಾಣ್ | ಡಾ. ರಾಜ್‌ಕುಮಾರ್ | ೦೪:೩೦ |
5. | "ಬಿಟ್ಹಾಕ್ ಗುರು" | ವಿ. ನಾಗೇಂದ್ರ ಪ್ರಸಾದ್ | ಶಂಕರ್ ಮಹಾದೇವನ್, ಚೇತನ್ ಸೋಸ್ಕಾ | ೦೪:೪೫ |
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ "'Abhi'". The Times of India (in ಇಂಗ್ಲಿಷ್). 2019-03-12. Retrieved 2022-03-21.
- ↑ "The volatile diva | Deccan Herald". June 2013.
- ↑ "Jains find Puneet Rajakumar's song offensive - Rediff.com".
- ↑ "Abhi film review - Puneet Rajkumar film".
- ↑ "Abhi Movie Review". chitraloka.com. 2003-04-26. Archived from the original on 2023-04-29. Retrieved 2022-05-30.